SUVARNA TIMES OF KARNATAKA

thumb_up 1777 को यह पसंद है
Langford Road 35
560027 Bengaluru, India
phone
फ़ोन दिखाने के लिए क्लिक करें

SUVARNA TIMES OF KARNATAKA Company Information

सामान्य जानकारी

ಹೊಸಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು,
ಹೊಸಯುಕ್ತಿ ಹಳೆತತ್ವ ಒಡೆಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ ಜಸವು ಜನಜೀವನಕೆ
- ಮಂಕುತಿಮ್ಮ

ಕನ್ನಡದ ಶ್ರೇಷ್ಠ ಪತ್ರಕರ್ತ, ಚಿಂತಕ, ಕವಿ ಡಿ. ವಿ. ಗುಂಡಪ್ಪನವರು ಹಿರಿಯರ ಅನುಭವ - ಕಿರಿಯರ ಉತ್ಸಾಹ ಒಗ್ಗೂಡಿದರೆ ಹೊಸ ಮನ್ವಂತರಕ್ಕೆ ನಾಂದಿ ಹಾಡಬಹುದು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಅನುಭವಯುಕ್ತ ಸುದ್ದಿಮನೆ ಹೊಂದಿರುವ ನಿರ್ಭೀತ ಕನ್ನಡ ದಿನಪತ್ರಿಕೆ.
ರಾಜ್ಯದಲ್ಲಿ ಇಷ್ಟೊಂದು ಪತ್ರಿಕೆಗಳಿರುವಾಗ ಮತ್ತೊಂದು ಬೇಕೆ? ಎಂದು ಕೇಳಿದವರೂ ಉಂಟು. ಪತ್ರಿಕೆ ಮಾಡುವುದು ಹುಡುಗಾಟವೇ ಎಂದು ಹೆದರಿಸಿದವರೂ ಉಂಟು. ಆದರೆ ಕನ್ನಡದಲ್ಲಿ ಹೇಳಿದರು”, ತಿಳಿಸಿದರು” ಎಂದು ವರದಿ ಮಾಡಲು ಸಾಕಷ್ಟು ಪತ್ರಿಕೆಗಳಿವೆ. ವಿಶೇಷ ಲೇಖನ, ಅಂಕಣಗಳ ಪತ್ರಿಕೆಗಳೂ ಇವೆ. ತನಿಖಾ ವರದಿಗಳೂ ಆಗಾಗ್ಗೆ ಪ್ರಕಟವಾಗುತ್ತವೆ. ಲೇಖನ, ವರದಿ ಬರುತ್ತದೆ. ನಂತರ ಏನಾಯ್ತು. ಇದಕ್ಕೆ ಉತ್ತರ ಇಲ್ಲ. ಹೀಗಾಗಿ ಜನರ ದನಿಯಾಗಿ ಜನಪರ ದನಿಯಾಗಿ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ರೂಪಿಸುವ ಉದ್ದೇಶ ನಮ್ಮದು.
ಭಾರತಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ, ದಲಿತರ ಶೋಷಣೆ ತಪ್ಪಿಲ್ಲ. ತಲೆಯ ಮೇಲೆ ಮಲ ಹೊರುವ ಅನಿಷ್ಠ ಪದ್ಧತಿಗಳು ಇಂದಿಗೂ ಜೀವಂತವಾಗಿವೆ. ಕಾಲ್ಕೋಳ, ಕೈಕೋಳ ಹಾಕಿ ಜೀತದಾಳುಗಳಂತೆ ಬಡ ದಲಿತರನ್ನು ದುಡಿಸಿಕೊಳ್ಳುವ ಬಲಿಷ್ಠರಿಗೂ ಕಡಿಮೆ ಏನಿಲ್ಲ. ಇಂಥ ಘೋರಗಳ ವಿರುದ್ಧ ದನಿಯಾಗಿ, ಜನಜಾಗೃತಿ ಮೂಡಿಸುವುದು, ಸರ್ಕಾರದ ಕಣ್ಣು ತೆರೆಸುವುದೇ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಮುಖ್ಯ ಉದ್ದೇಶ.
ಇದು ನಮ್ಮ ಪತ್ರಿಕೆಯಲ್ಲ. ನಿಮ್ಮ ಪತ್ರಿಕೆ. ನಿಮಗಾಗಿಯೇ ಇರುವ ಪತ್ರಿಕೆ. ನಿಮ್ಮ ನೋವು, ನಲಿವು, ಸಂತಸ, ಉತ್ಸಾಹ, ಪ್ರಯೋಗ, ಸಾಧನೆ ಎಲ್ಲವೂ ಇಲ್ಲಿರುತ್ತದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮಾಹಿತಿ, ಜನ ಸಾಮಾನ್ಯರಿಗೆ ಅಗತ್ಯವಾದ ಕಾನೂನು ತಿಳಿವಳಿಕೆ, ಸರ್ಕಾರದ ಯೋಜನೆಗಳ ವಿವರ, ಅದು ಅನುಷ್ಠಾನವಾಗಿದೆಯೇ ಆಗಿದ್ದರೆ ಎಷ್ಟು ಆvದೆ. ಯೋಜನೆಯ ಲಾಭ ಸಿಗದೆ ಎಷ್ಟುಜನ ಪರಿತಪಿಸುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸುವವರು ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಪತ್ರಿಕೆ ಉತ್ತರವಾಗಲಿದೆ.
ಜನರ ಸಮಸ್ಯೆಗಳಿಗೆ ಪತ್ರಿಕೆ ಸ್ಪಂದಿಸಲಿದೆ. ನೀವು ನಿಮ್ಮೆಲ್ಲಾ ಸಮಸ್ಯೆ ಹಂಚಿಕೊಳ್ಳಲು, ನಿಮ್ಮ ಸಮಸ್ಯೆ ಪರಿಹರಿಸಲು ಪತ್ರಿಕೆ ಸರ್ಕಾರ - ಸಾರ್ವಜನಿಕರ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ.
ನಾಡು, ನುಡಿ, ಪರಂಪರೆ, ವಿಜ್ಞಾನ, ಪರಿಸರ, ಪರೀಕ್ಷಾ ತಯಾರಿ, ಸಂಸ್ಕೃತಿ, ಕಲೆ, ಧರ್ಮ, ನೀತಿ, ನಿಯಮ, ನ್ಯಾಯ ಎಲ್ಲ ವಿಚಾರಗಳ ಮಾಹಿತಿಯ ಮಹಾಪೂರವೇ ಪತ್ರಿಕೆಯಲ್ಲಿ ಮೂಡಿ ಬರಲಿದೆ. ಮಾಹಿತಿಯ ಜೊತೆಗೆ ಮನರಂಜನೆಯೂ ಇರುತ್ತದೆ.
ಸಮಾಜದ ಎಲ್ಲ ವರ್ಗಗಳ ನೋವು-ನಲಿವಿಗೆ ಸ್ಪಂದಿಸುವ ಆಶಯ ಹಂಬಲ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯದ್ದು. ನಮ್ಮ ಈ ಸದಾಶಯಕ್ಕೆ ಬೆಂಬಲ ಅತ್ಯಗತ್ಯ, ಅನಿವಾರ್ಯ. ನಿಮ್ಮ ಹಾರೈಕೆಯೇ ನಮಗೆ ಶ್ರೀರಕ್ಷೆ.

Langford Road 35 Bengaluru

खुलने का समय
पार्किंग
कंपनी के पास पार्किंग है।
फ़ोन नंबर
+919449059545
Linki
सामाजिक लेखा
कीवर्ड
समाचारपत्र प्रकाशक, प्रकाशक

SUVARNA TIMES OF KARNATAKA Reviews & Ratings

How do you rate this company?

Are you the owner of this company? If so, do not lose the opportunity to update your company's profile, add products, offers and higher position in search engines.

आपके व्यवसाय के लिए एक परिचित पृष्ठ? Make sure everyone can find you and your offer. Create your dedicated company page on Yoys - it's simply and easy!
अपनी कंपनी जोड़ें